ಧೇನುಕ
 	ಒಬ್ಬ ರಾಕ್ಷಸ. ಈತ ಕತ್ತೆಯ ರೂಪ ಧರಿಸಿ ತನ್ನ ಪರಿವಾರದೊಂದಿಗೆ ಬೃಂದಾವನದ ಬಳಿಯಲ್ಲಿದ್ದ ತಾಳೆವನದಲ್ಲಿ ವಾಸವಿದ್ದು ಅಲ್ಲಿಗೆ ಬಂದವರನ್ನೆಲ್ಲ ಕೊಂದು ತಿನ್ನುತ್ತಿದ್ದ. ಒಂದು ದಿನ ಬಲರಾಮ ಇತರ ಗೊಲ್ಲ ಹುಡುಗರೊಡನೆ ಬಂದು ತಾಳೆಹಣ್ಣನ್ನು ತಿನ್ನುತ್ತಿದ್ದಾಗ ಕತ್ತೆಯ ರೂಪದಲ್ಲಿದ್ದ ಈ ರಾಕ್ಷಸ ಬಲರಾಮನ ಮೇಲೆ ಬಿದ್ದು ಆತನಿಂದ ಹತನಾದ. ಈ ವೃತ್ತಾಂತ ಮಹಾಭಾರತದ ಉದ್ಯೋಗಪರ್ವದಲ್ಲಿ ಬಂದಿದೆ.								(ಎಚ್.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ